Report: Arun Dsouza
ಮದರ್ ಆಫ್ ಗಾಡ್ ಚರ್ಚ್ ಹಾಲ್, ಮರಿಯಗಿರಿ, ಶಕ್ತಿನಗರದಲ್ಲಿ ರಾತ್ರಿ 9:00 ಗಂಟೆಗೆ, ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ, ಅಂತರ್ ಧರ್ಮೀಯ ಸೌಹಾರ್ದ ಆಯೋಗ ಹಾಗೂ ನೇಜಿಗುರಿ ಗುಂಪು ಇವರ ಜಂಟಿ ಸಹಭಾಗಿತ್ವದಲ್ಲಿ ಸೌಹಾರ್ದ ಈಸ್ಟರ್ ಹಬ್ಬ ಆಚರಣೆ ಹಾಗೂ ನೇಜಿಗುರಿ ಧ್ವನಿ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಜೊತೆಗೆ ನವೀಕರಿಸಿದ ಸಭಾಂಗಣವನ್ನು ಕಿರು ಪ್ರಾರ್ಥನ ದೊಂದಿಗೆ ಫಾ.ಜೆರಾಲ್ಡ್ ಅವರು ಆಶೀರ್ವದಿಸಿದರು.
ವೇದಿಕೆಯಲ್ಲಿರುವ ಗಣ್ಯರು ಕ್ಯಾಂಡಲ್ ಅನ್ನು ಉರಿಸಿ ಒಟ್ಟಿಗೆ ಇಡುವುದರ ಮೂಲಕ ನಾವೆಲ್ಲರೂ ಒಂದೇ ಎಂದು ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಂ| ಫಾದರ್ ಜೆರಾಲ್ಡ್ ಡಿಸೋಜಾ ಪ್ರಧಾನ ಧರ್ಮಗುರುಗಳು ಶಕ್ತಿನಗರ ಚರ್ಚ್ ಮತ್ತು ನಟರಾಜ್ ಪಚ್ಚನಾಡಿ ಸಮಾಜ ಸೇವಕರು ನೇಜಿಗುರಿ ಧ್ವನಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಟರಾಜ್ ಪಚ್ಚನಾಡಿ ಮಾತನಾಡಿ ನೇಜಿಗುರಿ ಗುಂಪು ಮಾಡುವಂತಹ ಎಲ್ಲಾ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಾಮಾಜಿಕ ಸೇವಕರ್ಯಗಳು ಯಶಸ್ವಿಯಾಗಲಿ, ಎಲ್ಲಾ ಕಾರ್ಯಕ್ರಮಗಳು ಸೌಹಾರ್ದಯುತವಾಗಿ ನಡೆದು ಯಶಸ್ವಿ ಯಾಗಿ ಸಮಾಜಕ್ಕೆ ಮಾದರಿಯಾಗಲಿ. ದೇವರ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಂ| ಫಾದರ್ ಜೆರಾಲ್ಡ್ ಡಿಸೋಜಾ ಮಾತನಾಡಿ, ನೇಜಿಗುರಿ ಗುಂಪಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮಾಜಕ್ಕೆ ನೀಡುವ ಸೇವೆ, ಸಾಮಾಜಿಕ ಕಳಕಳಿಯನ್ನು ಜಾಗೃತಗೊಳಿಸುವಂತಹ ಕಾರ್ಯಕ್ರಮಗಳನ್ನು ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಪ್ರಜ್ಞೆಯನ್ನು ಉಂಟು ಮಾಡಿದ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಧ್ವನಿ ಏಕಾಂಗಿಯಾಗಿರದೇ, ಎಲ್ಲರ ಹೃನ್ಮನಗಳನ್ನು ತಲುಪಿ, ನಮ್ಮೆಲ್ಲರ ಧ್ವನಿಯಾಗಿ ಎಲ್ಲರ ಸಹಬಾಳ್ವೆಗೆ ನಾಂದಿಯಾಗಲಿ ಎಂದು ಶುಭಕೋರಿದರು.
ನೇಜಿಗುರಿ ಗುಂಪು ವತಿಯಿಂದ ಕೇಕ್ ಕತ್ತರಿಸುವ ಮೂಲಕ ಫಾದರ್ ಜೆರಾಲ್ಡ್ ಡಿಸೋಜಾ ಅವರ ಧರ್ಮ ಗುರುಗಳಾಗಿ 37 ವರ್ಷ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರದೀಪ್ ಗೌರೀಶ್, ಅಧ್ಯಕ್ಷರು ಪೃಥ್ವಿ ಸೇವಾ, ವಂ| ಫಾದರ್ ಪ್ರಮೋದ್ ಕ್ರಾಸ್ತಾ, ಸಹಾಯಕ ಧರ್ಮಗುರುಗಳು ಶಕ್ತಿನಗರ ಚರ್ಚ್, ಹರಿಣಾಕ್ಷಿ, ಕಾರ್ಯದರ್ಶಿ ನೇಜಿಗುರಿ ಗುಂಪು, ದಿವ್ಯ ಲತಾ, ಕಾರ್ಯಕ್ರಮ ಸಂಯೋಜಕರು ನೇಜಿಗುರಿ ಗುಂಪು, ರಾಮಚಂದ್ರ ನೇಜಿಗುರಿ, ವಿನ್ಸೆಂಟ್ ಕಾರ್ಲೊ ಉಪಾಧ್ಯಕ್ಷರು ಚರ್ಚ್ ಪಾಲನಾ ಸಮಿತಿ, ಪೌಲಿನ್ ಡಿಸೋಜಾ, ಕಾರ್ಯದರ್ಶಿ ಚರ್ಚ್ ಪಾಲನಾ ಸಮಿತಿ, ಆಶಾ ಮೊಂತೆರೊ, ಆಯೋಗ ಸಂಯೋಜಕರು, ಅರುಣ್ ಡಿಸೋಜ, ನೇಜಿಗುರಿ ಗುಂಪು ಅಧ್ಯಕ್ಷರು ಹಾಗೂ ಸಂಪಾದಕರು ನೇಜಿಗುರಿ ಧ್ವನಿ ವೇದಿಕೆಯಲ್ಲಿದ್ದರು.
ಶಕ್ತಿನಗರ ಚರ್ಚಿನ ಭಕ್ತಾದಿಗಳು, ಅಂತರ್ ಧರ್ಮೀಯ ಸೌಹಾರ್ದ ಆಯೋಗದ ಸದಸ್ಯರು, ನೇಜಿಗುರಿ ಗುಂಪಿನ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ರಾಕೇಶ್ ನೇಜಿಗುರಿ ಕಾರ್ಯಕ್ರಮ ನಿರೂಪಣೆ ಮಾಡಿದರು.