Report: Arun Dsouza
ಮದರ್ ಆಫ್ ಗಾಡ್ ಚರ್ಚ್, ಮರಿಯಗಿರಿ, ಶಕ್ತಿನಗರ ಸಂತ ಲಾರೆನ್ಸರ ವಾಳೆಯ ಹಬ್ಬದ ಆಚರಣೆಯು ಆಗಸ್ಟ್ 21 ರಂದು ಬೆಳಿಗ್ಗೆ 7:30 ಗಂಟೆಗೆ ದಿವ್ಯ ಬಲಿ ಪೂಜೆ ಅರ್ಪಿಸುವುದರೊಂದಿಗೆ ಪ್ರಾರಂಭವಾಯಿತು, ಎಲ್ಲಾ ವಾಳೆಯ ಸದಸ್ಯರು ಹಾಗೂ ಚರ್ಚಿನ ಭಕ್ತಾದಿಗಳು ಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಹಬ್ಬದ ಸಂಭ್ರಮದ ಭಾಗವು ಜೋಸೆಫ್ ಕಾರ್ಮಿನ್ ಡಿಸಿಲ್ವಾ ಮನೆ ವಠಾರದಲ್ಲಿ ಸಂಜೆ 6.00 ಗಂಟೆಗೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ ವಾಳೆಯ ಗುರಿಕರ ಶ್ರೀಮತಿ ಮೊಲಿ ಡಿಸೋಜಾ ಅವರು ಭಕ್ತಿದಯಕ ಪ್ರಾರ್ಥನೆ ಸೇವೆಯನ್ನು ನಡೆಸಿದರು.
ಶ್ರೀಮತಿ ಮೊಲಿ ಡಿಸೋಜಾ ಅವರು ತಮ್ಮ ಸ್ವಾಗತ ಭಾಷಣದಿಂದ ಎಲ್ಲರಿಗೂ ಗೌರವ ಅರ್ಪಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಶಕ್ತಿನಗರ ಚರ್ಚಿನ ಧರ್ಮಗುರುಗಳು ವಂದನಿಯ ಜೆರಾಲ್ಡ್ ಡಿಸೋಜಾ ಆಶೀರ್ವಾದದೊಂದಿಗೆ ಶುಭ ಹಾರೈಸಿದರು. ಆಯೋಗ ಸಂಯೋಜಕಿ ಆಶಾ ಮೊಂತೆರೊ ಈ ಸಂದರ್ಭಕ್ಕೆ ಸೂಕ್ತವಾದ ಸಂದೇಶವನು ನೀಡಿದರು.
ಈ ಸಂದರ್ಭದಲ್ಲಿ 10 ವರ್ಷ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಅರುಣ್ ಡಿಸೋಜ, 2 ವರ್ಷ ಸೇವೆ ಮಾಡಿದ ಆಲಿಸ್ ಪಾಯ್ಸ್ ಹಾಗೂ ಕಲಿಕೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಾಳೆಯ ಸದಸ್ಯರು ತಮ್ಮ ಉತ್ಸಾಹ ಮತ್ತು ಒಗ್ಗಟ್ಟಿನಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಕಾರ್ಲೊ, ಕಾರ್ಯದರ್ಶಿ ಪೌಲಿನ್ ಡಿಸೋಜಾ, ಎಸ್.ಸಿ.ಸಿ. ಸಂಚಾಲಕರಾದ ಟೋನಿ ಪಿಂಟೋ, ಪಾಲನಾ ಸಮಿತಿಯ ಹಾಗೂ ವಾರ್ಡಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಅರುಣ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಮೇರಿ ರಸ್ಕೀನ ವಂದನಾರ್ಪಣೆಗೈದರು. ಸಂತ ಲಾರೆನ್ಸರ ವಾಳೆಯ ಸದಸ್ಯರು ಸೇರಿ ತಯಾರಿಸಿದ ಭೋಜನವನ್ನು ಎಲ್ಲರೂ ಸವಿದರು.