loader image

ರಕ್ತದಾನ ಶಿಬಿರ

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಸಿಟಿ ವಲಯ ಇವರ ಮುಂದಾಳತ್ವದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇವರ ಸಹಕಾರದಲ್ಲಿ ಕಥೊಲಿಕ್ ಸಭಾ ಶಕ್ತಿನಗರ ಘಟಕ, ನೇಜಿಗುರಿ ಗುಂಪು ಹಾಗೂ ನೇಜಿಗುರಿ ಧ್ವನಿ ಇವರ ಜಂಟಿ ಆಶ್ರಯದಲ್ಲಿ ಬೆಳ್ಳಿ ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಮದರ್ ಆಫ್ ಗೊಡ್ ಚರ್ಚ್, ಮರಿಯಗಿರಿ ಶಕ್ತಿನಗರದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಪ್ರಾರ್ಥನ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಂ. ಫಾದರ್ ಜೆರಾಲ್ಡ್ ಡಿಸೋಜಾ ಪ್ರಧಾನ ಧರ್ಮಗುರುಗಳು, ಶಕ್ತಿನಗರ ಚರ್ಚ್ ಇವರು ಕಾರ್ಯಕ್ರಮಕ್ಕೆ ಆಶೀರ್ವಚನ ಹಾಗೂ ಶುಭಾಶಯ ಕೋರಿದರು. ಆಂಟೋನಿ ಡಿಸೋಜಾ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ಶಕ್ತಿನಗರ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ಸ್ಟೇನಿ ಮಸ್ಕರೇನ್ಹಸ್, ಕಾರ್ಯದರ್ಶಿ ಮೇರಿ ಪಿಂಟೋ, ಕಥೊಲಿಕ್ ಸಭಾ ಕೇಂದ್ರಿಯಾ ಹಾಗೂ ವಲಯ ಕಾರ್ಯದರ್ಶಿ ವಿಲ್ಮಾ ಮೊಂತೆರೊ, ಸಿಟಿ ವಲಯ ಬೆಳ್ಳಿ ಹಬ್ಬದ ಸಂಚಾಲಕರಾದ ಪ್ರಶಾಂತ್ ಸಲ್ದಾನ, ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗೂ ನೇಜಿಗುರಿ ಗುಂಪು ಅಧ್ಯಕ್ಷರು ಅರುಣ್ ಡಿಸೋಜಾ, ನೇಜಿಗುರಿ ಗುಂಪು ಕಾರ್ಯದರ್ಶಿ ಶ್ರೀಮತಿ ಹರಿಣಿ ನೇಜಿಗುರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಸಿಟಿ ವಲಯ, ಕಥೊಲಿಕ್ ಸಭಾ ಶಕ್ತಿನಗರ ಘಟಕ, ನೇಜಿಗುರಿ ಗುಂಪು ಇದರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ವಿಲಿಯಂ ಕುಲಾಸೂ ಕಾರ್ಯಕ್ರಮ ನಿರೂಪಿಸಿದರು. ಕಥೊಲಿಕ್ ಸಭಾ ಸಿಟಿ ವಲಯ ಅಧ್ಯಕ್ಷರಾದ ವಿಲ್ಫ್ರೆಡ್ ಆಲ್ವಾರಿಸ್ ಸ್ವಾಗತಿಸಿ, ಕಥೊಲಿಕ್ ಸಭಾ ಶಕ್ತಿನಗರ ಘಟಕ ಕಾರ್ಯದರ್ಶಿ, ರಕ್ತದಾನ ಶಿಬಿರದ ಸಂಚಾಲಕರಾದ ಟೋನಿ ಪಿಂಟೋ ವಂದಿಸಿದರು. ಬೆಳಿಗ್ಗೆ ಚಾ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.