ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ ಇವರ ಮುಂದಾಳತ್ವದಲ್ಲಿ ಮುಗ್ರೋಡಿ ಟೈಗರ್ಸ್, ಕಥೊಲಿಕ್ ಸಭಾ, ಸ್ತ್ರಿ ಸಂಘಟನೆ, ಸೌವರ್ದ ಆಯೋಗ, ICYM, YCS, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ದೀಪಾವಳಿ ಆಚರಣೆ-2023, 18.11.2023 ಶನಿವಾರ ಸಂಜೆ 6 ಗಂಟೆಗೆ ಚರ್ಚ್ ಸಭಾ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗೂ ನೇಜಿಗುರಿ ಗುಂಪು ಅಧ್ಯಕ್ಷರು, ನೇಜಿಗುರಿ ಧ್ವನಿ ಸಂಪಾದಕರು, ಸೌಹಾರ್ದ ಆಯೋಗ ಸಂಚಾಲಕರಾದ ಶ್ರೀ ಅರುಣ್ ಡಿಸೋಜ ಎಲ್ಲರಿಗೂ ಸ್ವಾಗತ ಕೋರಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾದ ಪಕ್ಕಲಡ್ಕ ಯುವಕ ಮಂಡಲ (ರಿ.) ಇದರ ಅಧ್ಯಕ್ಷರಾದ ಶ್ರೀಯುತ ನಾಗರಾಜ್ ಬಜಾಲ್ ಅವರಿಗೆ ಪರಿಸರಕ್ಕೆ ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು. ಅವರು ಮಾತನಾಡಿ ದೀಪಾವಳಿ ಆಚರಣೆ, ಮಹತ್ವದ ಬಗ್ಗೆ ಹಾಗೂ ಪರಿಸರದ ಕಾಳಜಿ ಬಗ್ಗೆ ಜನರಿಗೆ ತಿಳಿಸಿದರು. 3 ಮಂದಿಗೆ ಹಾಗೂ ಎಲ್ಲಾ ಧರ್ಮದವರೊಟ್ಟಿಗೆ ಬೆರೆಯುವ, ಸಾಮಾಜಿಕ ಕಳಕಳಿರುವ ವಂ| ಫಾದರ್ ಜೆರಾಲ್ಡ್ ಡಿಸೋಜಾ,ಪ್ರಧಾನ ಧರ್ಮಗುರುಗಳು, ಶಕ್ತಿನಗರ ಚರ್ಚ್ ಇವರಿಗೆ ಶ್ರೀ ಶುಭಕರ್ ಮುಗ್ರೋಡಿ ,ಸಮಾಜ ಸೇವಕರು ಇವರಿಂದ ಸನ್ಮಾನಿಸಲಾಯಿತು. ಅಧ್ಯಕ್ಷ್ಯ ಭಾಷಣ ವಂ| ಫಾದರ್ ಜೆರಾಲ್ಡ್ ಡಿಸೋಜಾ ಮಾತನಾಡಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಕೋರಿದರು. ಮುಗ್ರೋಡಿ ಟೈಗರ್ಸ್ ಹುಲಿ ಕುಣಿತ ಮಾಡುವವರನ್ನು ಹಾಗೂ ವೇದಿಕೆಯಲ್ಲಿರುವ ಗಣ್ಯ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು. ದೀಪಾವಳಿಯ ಮಹತ್ವವನ್ನು ತಿಳಿಸುವುದರೊಂದಿಗೆ ಸಂಸ್ಕೃತಿಕ ಕಾರ್ಯಕ್ರಮ, ತುಳುನಾಡಿನ ಸಂಸ್ಕೃತಿಯಾದ ಹುಲಿ ಕುಣಿತ ,ಹಣತೆಯನ್ನು ಬೆಳಗಿಸಿ , ಸಿಹಿ ತಿಂಡಿಗಳ ಜೊತೆಗೆ ಪ್ರೀತಿಯನ್ನು ಹಂಚಿದರು. ಶ್ರೀಮತಿ ಆಶಾ ಮೊಂತೆರೊ ಕಾರ್ಯಕ್ರಮ ನಿರೂಪಿಸಿದರು. ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗೂ ನೇಜಿಗುರಿ ಗುಂಪು ಅಧ್ಯಕ್ಷರು, ನೇಜಿಗುರಿ ಧ್ವನಿ ಸಂಪಾದಕರು, ಸೌಹಾರ್ದ ಆಯೋಗ ಸಂಚಾಲಕರಾದ ಶ್ರೀ ಅರುಣ್ ಡಿಸೋಜ ಎಲ್ಲರಿಗೂ ಸ್ವಾಗತ ಕೋರಿದರು. ಶಕ್ತಿನಗರ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಸ್ಟೇನಿ ಮಸ್ಕರೇನ್ಹಸ್ ವಂದಿಸಿದರು. ಅನೇಕ ಗಣ್ಯ ವ್ಯಕ್ತಿಗಳು ಹಾಗೂ ಎಲ್ಲಾ ಧರ್ಮದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾರು ಒಂದಾಗಿ ಬಾಳಲು ಈ ಕಾರ್ಯಕ್ರಮ ಸಹಕಾರಿಯಾಯಿತು. ಮುಂದಿನ ದಿನಗಳಲ್ಲಿ ಇಂತಹ ಅನೇಕ ಸೌಹಾರ್ದ ಕಾರ್ಯಕ್ರಮ ನಡೆಯಲಿ.