ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ ಇವರ ಮುಂದಾಳತ್ವದಲ್ಲಿ ಮುಗ್ರೋಡಿ ಟೈಗರ್ಸ್, ಕಥೊಲಿಕ್ ಸಭಾ, ಸ್ತ್ರಿ ಸಂಘಟನೆ, ಸೌವರ್ದ ಆಯೋಗ, ಐ.ಸಿ.ವೈ.ಎಮ್ , ವೈ.ಸಿ. ಎಸ್ ಶಕ್ತಿನಗರ ಘಟಕ, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ಕ್ರಿಸ್ಮಸ್ ಸ್ನೇಹಕೂಟ ಶುಕ್ರವಾರ 22 ಡಿಸೆಂಬರ್ 2023 ಸಂಜೆ 6:30 ಗಂಟೆಗೆ ಸರಿಯಾಗಿ ಮುಗ್ರೋಡಿಯ ಶಾಂತಿ ರವರ ಮನೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕ್ರಿಸ್ಮಸ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ನವೀನ್ ಕುಮಾರ್, ಮುಗ್ರೋಡಿ ಮುಗ್ರೋಡಿ ಟೈಗರ್ಸ್ ಹಾಗೂ ಸಮಾಜ ಸೇವಕರಾದ ಶುಭಕರ್ ಮುಗ್ರೋಡಿ ಅವರು ಸಮಾಜಕ್ಕೆ ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು. ಹಾಗೂ ಕ್ರಿಸ್ಮಸ್ ಸೌಹಾರ್ದ ಉಡುಗೊರೆ 3 ಕುಟುಂಬಕ್ಕೆ ಹಾತ್ತು ಸಾವಿರ ಹಣದ ಸಹಾಯ ಇದರ ಜೊತೆಗೆ ಒಂದು ಕುಟುಂಬಕ್ಕೆ ಮೂರು ಸಾವಿರ ಹಣದ ಸಹಾಯ, ಹಾತ್ತು ಕೆಜಿ ಅಕ್ಕಿ, ಕ್ರಿಸ್ಮಸ್ ಕಿಟ್ ಕಾರ್ಯಕ್ರಮದಲ್ಲಿ ವಿತರಿಸಲಾಯಿತು ಹಾಗೂ ಹಾತ್ತು ಕುಟುಂಬಕ್ಕೆ ಕ್ರಿಸ್ಮಸ್ ಕಿಟ್ ವಿತರಣೆಗೆ ಕಾರ್ಯಕ್ರಮದ ಅಧ್ಯಕ್ಷರಾದ ವಂ| ಫಾದರ್ ಜೆರಾಲ್ಡ್ ಡಿಸೋಜಾ ಪ್ರಧಾನ ಧರ್ಮಗುರುಗಳು, ಮದರ್ ಆಫ್ ಗೊಡ್ ಚರ್ಚ್, ಮರಿಯಾಗಿರಿ, ಶಕ್ತಿನಗರ, ನವೀನ್ ಕುಮಾರ್, ಮುಗ್ರೋಡಿ, ಮುಗ್ರೋಡಿ ಟೈಗರ್ಸ್ ಹಾಗೂ ಸಮಾಜ ಸೇವಕರಾದ ಶುಭಕರ್ ಮುಗ್ರೋಡಿ ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಅಧ್ಯಕ್ಷ್ಯ ಭಾಷಣ ವಂ| ಫಾದರ್ ಜೆರಾಲ್ಡ್ ಡಿಸೋಜಾ ಮಾತನಾಡಿ ಇಂತಹ ಕಾರ್ಯಕ್ರಮ ಎಲ್ಲೆಡೆ ನಡೆಯಲಿ, ಉತ್ತಮವಾದ ಕಾರ್ಯಕ್ರಮ, ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಕೋರಿದರು. ಸಿಹಿ ತಿಂಡಿಗಳ ಜೊತೆಗೆ ಪ್ರೀತಿಯನ್ನು ಹಂಚಿದರು.
ಆಶಾ ಮೊಂತೆರೊ ಕಾರ್ಯಕ್ರಮ ನಿರೂಪಿಸಿದರು. ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗೂ ನೇಜಿಗುರಿ ಗುಂಪು ಅಧ್ಯಕ್ಷರು, ನೇಜಿಗುರಿ ಧ್ವನಿ ಸಂಪಾದಕರು, ಸೌಹಾರ್ದ ಆಯೋಗ ಸಂಚಾಲಕರಾದ ಅರುಣ್ ಡಿಸೋಜ ಎಲ್ಲರಿಗೂ ಸ್ವಾಗತ ಕೋರಿದರು. ಸ್ತ್ರಿ ಸಂಘಟನೆ ಅಧ್ಯಕ್ಷರು ಹಾಗೂ ಚರ್ಚ್ ಪಾಲನ ಸಮಿತಿ ಕಾರ್ಯದರ್ಶಿ ಮೇರಿ ಪಿಂಟೋ ವಂದಿಸಿದರು. ಸ್ಟೇನಿ ಮಸ್ಕರೇನ್ಹಸ್ ಶಕ್ತಿನಗರ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರು, ಪದ್ಮನಾಭ ಸಮಾಜ ಸೇವಕರು, ಗೋಪಾಲ ಸಮಾಜ ಸೇವಕರು, ಸಚಿನ್ ಅಧ್ಯಕ್ಷರು ಆದಿಶಕ್ತಿ ಗೇಮ್ಸ್ ಟೀಮ್, ಟೋನಿ ಪಿಂಟೋ ಆಯೋಗ ಸಂಚಾಲಕರು ಹಾಗೂ ಕಥೊಲಿಕ್ ಸಭಾ ಕಾರ್ಯದರ್ಶಿ, ಅನೀಶ್ ಮಿನೇಜಸ್ ಅಧ್ಯಕ್ಷರು ಐ.ಸಿ.ವೈ.ಎಮ್., ಡೆರಾನ್ ಕ್ರಾಸ್ತಾ, ಅಧ್ಯಕ್ಷರು ವೈ.ಸಿ.ಎಸ್., ಹಾಗೂ ಅನೇಕ ಗಣ್ಯ ವ್ಯಕ್ತಿಗಳು, ಎಲ್ಲಾ ಧರ್ಮದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಲ್ಲಾರು ಒಂದಾಗಿ ಬಾಳಲು ಈ ಕಾರ್ಯಕ್ರಮ ಪ್ರೇರಣೆ ಆಯ್ತು.