loader image

ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಕ್ತಿನಗರದಲ್ಲಿ ಬಹಳ ಯಶಸ್ವಿಯಾದ ಉಚಿತ ಆರೋಗ್ಯ ತಪಾಸಣಾ ಶಿಬಿರ 2022.
‘ಆರೋಗ್ಯವೇ ಭಾಗ್ಯ’ ನಾಣ್ಣುಡಿಯಂತೆ ಸರ್ವರಿಗೂ ಆರೋಗ್ಯ ಸೇವೆ ದೊರಕಿಸಿಕೊಡುವ ಉದ್ದೇಶದಿಂದ ದಿನಾಂಕ 20 ಮಾರ್ಚ್ 2022 ಆದಿತ್ಯವಾರ ಬೆಳಿಗ್ಗೆ ಮದರ್ ಆಫ್ ಗಾಡ್ ಚರ್ಚ್ ಸಭಾಂಗಣದಲ್ಲಿ ನೆರವೇರಿತು.
ಭಾರತೀಯ ಕಥೋಲಿಕ್ ಯುವ ಸಂಚಾಲನ ಶಕ್ತಿನಗರ ಘಟಕ, ಕಥೋಲಿಕ್ ಸಭಾ ಶಕ್ತಿನಗರ ಘಟಕ, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಫಾ| ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಕಂಕನಾಡಿ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶಕ್ತಿನಗರ ಚರ್ಚ್ ಸಭಾಂಗಣದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಭಾರತೀಯ ಕಥೋಲಿಕ್ ಯುವ ಸಂಚಾಲನದ ಅಧ್ಯಕ್ಷರಾದ ಗ್ರಾಕ್ಸ್ ಪಿಂಟೋ ಹಾಜರಿದ್ದ ಸರ್ವರಿಗೂ ಸ್ವಾಗತಿಸಿದರು.
ವೇದಿಕೆಯಲ್ಲಿರುವ ಗಣ್ಯರು ವಿನೂತನ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಾ| ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಇದರ ಮಾರ್ಕೆಟಿಂಗ್ ಎಕ್ಸಿಕ್ಯೂಟ್ ರಾದ ಪೃಥ್ವಿರಾಜ್ ಹೆಗ್ಗಡೆರವರು ಉಚಿತ ಆರೋಗ್ಯ ತಪಾಸಣಾ ಶಿಬಿರ 2022 ಇದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ, ಶಕ್ತಿನಗರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಫಾದರ್ ಜೆರಾಲ್ಡ್ ಡಿಸೋಜಾ ರವರು ಹಿತನುಡಿಗಳನ್ನು ಆಡಿದರು.
ವಿನ್ಸೆಂಟ್ ಕಾರ್ಲೊ, ಉಪಾಧ್ಯಕ್ಷರು, ಚರ್ಚ್ ಪಾಲನಾ ಸಮಿತಿ, ಪೌಲಿನ್ ಡಿಸೋಜಾ, ಕಾರ್ಯದರ್ಶಿ ಚರ್ಚ್ ಪಾಲನಾ ಸಮಿತಿ, ಪೃಥ್ವಿರಾಜ್ ಹೆಗ್ಗಡೆ, ಮಾರ್ಕೆಟಿಂಗ್ ಎಕ್ಸಿಕ್ಯೂಟ್, ಫಾ| ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಕಂಕನಾಡಿ, ಗ್ರಾಕ್ಸ್ ಪಿಂಟೋ, ಅಧ್ಯಕ್ಷರು ಭಾರತೀಯ ಕಥೋಲಿಕ ಯುವ ಸಂಚಾಲನ, ಜಾನ್ಸನ್ ಡಿಸೋಜಾ, ಅಧ್ಯಕ್ಷರು, ಕಥೊಲಿಕ್ ಸಭಾ, ಅರುಣ್ ಡಿಸೋಜ, ಅಧ್ಯಕ್ಷರು, ನೇಜಿಗುರಿ ಗುಂಪು ಹಾಗೂ ಸಂಪಾದಕರು, ನೇಜಿಗುರಿ ಧ್ವನಿ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಅಧ್ಯಕ್ಷರಾದ ಜಾನ್ಸನ್ ಡಿಸೋಜಾ ಅವರು ನೆರೆದವರಿಗೆ ಧನ್ಯವಾದದ ಮಾತು ಹೇಳಿದರು. ರಾಕೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. 180 ಫಲಾನುಭವಿಗಳು ಇದರ ಸದುಪಯೋಗ ಪಡೆದರು.