Report: Arun Dsouza
ಕಥೋಲಿಕ್ ಸಭಾ ಶಕ್ತಿನಗರ ತನ್ನ ಸ್ಥಾಪನೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಮದರ್ ಆಫ್ ಗಾಡ್ ಚರ್ಚ್, ಮರಿಯಾಗಿರಿ, ಶಕ್ತಿನಗರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಸ್ಟ್ಯಾನಿ ಆಲ್ವಾರಿಸ್ ಬೊಂದೆಲ್ ಸಮಾಜ ಸೇವಕರು ಮತ್ತು ನಿಶಾ ಡಿಸೋಜಾ ಐ.ಸಿ.ವೈ.ಮ್ ಸಿಟಿ ವಲಯ ಅಧ್ಯಕ್ಷರು ಭಾಗವಹಿಸಿ ಶುಭ ಹಾರೈಸಿದರು.
ಶಕ್ತಿನಗರ ಚರ್ಚಿನ ಧರ್ಮಗುರುಗಳು ವಂದನಿಯ ಜೆರಾಲ್ಡ್ ಡಿಸೋಜಾ, ಕಥೋಲಿಕ್ ಸಭಾ ಶಕ್ತಿನಗರ ಅಧ್ಯಕ್ಷರಾದ ಅರುಣ್ ಡಿಸೋಜ, ಕಾರ್ಯದರ್ಶಿ ಟೋನಿ ಪಿಂಟೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಕಾರ್ಲೊ, ಕಾರ್ಯದರ್ಶಿ ಪೌಲಿನ್ ಡಿಸೋಜಾ, 21 ಆಯೋಗ ಸಂಯೋಜಕಿ ಆಶಾ ಮೊಂತೆರೊ, ಪರಿಸರ ಆಯೋಗದ ಸಂಯೋಜಕಿ ಜಸಿಂತಾ ಡಿಸೋಜ, ಐ.ಸಿ.ವೈ.ಮ್ ಶಕ್ತಿನಗರ ಅಧ್ಯಕ್ಷ ಅನೀಶ್ ಮಿನೇಜಸ್, ಕಥೋಲಿಕ್ ಸಭಾ ಸದಸ್ಯರು, ಐ.ಸಿ.ವೈ.ಮ್ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.