Report: Arun Dsouza
ನೇಜಿಗುರಿ ಗುಂಪು, ಕಥೊಲಿಕ್ ಸಭಾ, ಅಂತರ್ ಧರ್ಮೀಯ ಸೌಹಾರ್ದ ಆಯೋಗ, ನೇಜಿಗುರಿ ಕ್ರಿಕೆಟರ್ಸ್ ಟೀಮ್, ನೇಜಿಗುರಿ ಸ್ವಸಹಾಯ ಸಂಘ ಮತ್ತು ನೇಜಿಗುರಿ ಧ್ವನಿ ಇವರ ಜಂಟಿ ಆಶ್ರಯದಲ್ಲಿ ನೇಜಿಗುರಿ ತೆನೆಹಬ್ಬ -2022 ದಾಮೋದರ್-ಲೀಲಾವತಿ ಮನೆಯಲ್ಲಿ ಬಹಳ ಅದ್ದೂರಿಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಅದರ ಜೊತೆಗೆ ತೆನೆಯನ್ನು ಸುಲಿದು, ಅಕ್ಕಿಯನ್ನು ಪಾಯಸದೊಂದಿಗೆ ಬೆರೆಸಿ ಎಲ್ಲರೂ ಸವಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಂದನಿಯ ಜೆರಾಲ್ಡ್ ಡಿಸೋಜ ರವರು ವಹಿಸಿದ್ದರು. ಮುಖ್ಯ ಅತಿಥಿ ಸತೀಶ್ ಬಂದಲೆ, ವಂದನಿಯ ಜೆರಾಲ್ಡ್ ಲೋಬೊ ಕಾಪುಚಿನ್, ಶೇಖರ್ ಪೂಜಾರಿ ಪದವಿನಂಗಡಿ, ಜಗದೀಶ್ ಪೂಜಾರಿ ಮುಖ್ಯ ಅರ್ಚಕರು ಶ್ರೀ ಜುಮಾದಿ ಬಂಟ ದೈವಸ್ಥಾನ, ವನಿತ ಪ್ರಸಾದ್ ಕಾರ್ಪೊರೇಟರ್ ಉಪಸ್ಥಿತರಿದರು.
ನೇಜಿಗುರಿ ಸ್ವಸಹಾಯ ಸಂಘದ ಪಾಸ್ ಪುಸ್ತಕವನ್ನು ಅಧ್ಯಕ್ಷರು ಹರಿಣಿ, ಕಾರ್ಯದರ್ಶಿ ಮೀನಾಕ್ಷಿ ಹಾಗೂ ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ಅರುಣ್ ಡಿಸೋಜ ನೇಜಿಗುರಿ ಗುಂಪು ಅಧ್ಯಕ್ಷರು ನೇಜಿಗುರಿ ಗುಂಪಿನ ವರದಿಯನ್ನು ಸಭೆಯಲ್ಲಿ ಸಲ್ಲಿಸಿದರು. ನೇಜಿಗುರಿ ಕ್ರಿಕೆಟರ್ಸ್ ಟೀಮ್ ವತಿಯಿಂದ ವಿವಿಧ ಆಟವನ್ನು ಆಡಿಸಿ ಗೆದ್ದವರಿಗೆ ಬಹುಮಾನ ಕೊಡಿಸಿದರು. ದಿವ್ಯಲತಾ ಇವರ ಮುಂದಾಳತ್ವದಲ್ಲಿ ನೇಜಿಗುರಿ ಸದಸ್ಯರೆಲ್ಲ ಸೇರಿ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿದರು. ಕಥೊಲಿಕ್ ಸಭಾ ಕಾರ್ಯದರ್ಶಿ ಟೋನಿ ಪಿಂಟೋ ಕಥೊಲಿಕ್ ಸಭಾದ ಚರಿತ್ರೆಯನ್ನು ವಾಚಿಸಿದರು.
ಅತಿಥಿಗಳಾಗಿ ಪೌಲಿನ್ ಡಿಸೋಜಾ ಶಕ್ತಿನಗರ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ, ಆಶಾ ಮೊಂತೆರೊ ಆಯೋಗ ಸಂಯೋಜಕರು, ಸುಜಿತ್ ಪೂಜಾರಿ, ಶುಭಕರ, ಮೊಲಿ ಡಿಸೋಜಾ ಸಂತ ಲಾರೆನ್ಸರ ವಾಳೆಯಾ ಗುರಿಕಾರರು, ಮೇರಿ ರಸ್ಕೀನ ಸಂತ ಲಾರೆನ್ಸರ ವಾಳೆಯಾ ಪ್ರತಿನಿಧಿ ಭಾಗವಹಿಸಿದ್ದರು. ಹರಿಣಾಕ್ಷಿ ನೇಜಿಗುರಿ ಗುಂಪು ಕಾರ್ಯದರ್ಶಿ ಧನ್ಯವಾದ ಅರ್ಪಿಸಿದರು, ರಾಕೇಶ್ ನೇಜಿಗುರಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂತೋಷವನ್ನು ಇಮ್ಮಡಿಗೊಳಿಸಲು ಊಟದ ವ್ಯವಸ್ಥೆ ಮಾಡಲಾಗಿತ್ತು.