ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ), ನೇಜಿಗುರಿ ಗುಂಪು, ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ (ರಿ), ಪೃಥ್ವಿ ಸೇವಾ, ಕಥೋಲಿಕ್ ಸಭಾ ಸಿಟಿ ವಲಯ ಮತ್ತು ಕಥೋಲಿಕ್ ಸಭಾ ಶಕ್ತಿನಗರ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 28ರಂದು ನೇಜಿಗುರಿಯ ಸುಜಿ ಅಣ್ಣ (ತಾರಕ್ಕ) ಅವರ ಮನೆಯಲ್ಲಿ ಸೌಹಾರ್ದ ತೆನೆಹಬ್ಬ (ಕುರಲ್ ಪರ್ಬ) ವನ್ನು ಭವ್ಯವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂತೋಷ್ ಡಿ’ಸೋಜಾ, ಬಜ್ಪೆ (ಅಧ್ಯಕ್ಷರು, ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ವಹಿಸಿದರು. ಮುಖ್ಯ ಅತಿಥಿಗಳಾಗಿ ವಂದನೀಯ ಗುರುಗಳು ಜೆರಾಲ್ಡ್ ಲೋಬೊ, ಕಾಪುಚಿನ್ (ಸುಪೀರಿಯರ್, ಸಂತ ಆನ್ನ ಫ್ರಯಾರಿ, ಬಿಜಯ್), ಶ್ರೀ ಮನೋಜ್ ಕುಮಾರ್, ವಾಮಂಜೂರು ( ಖ್ಯಾತ ವಕೀಲರು), ಶ್ರೀ ಪಾವ್ಲ್ ರೋಲ್ಫಿ ಡಿ’ಕೋಸ್ತಾ ( ಮಾಜಿ ಅಧ್ಯಕ್ಷರು, ಕಥೋಲಿಕ್ ಸಭಾ ಮಂಗಳೂರು ಪ್ರದೇಶ/PRO), ಶ್ರೀ ನಟರಾಜ್ ಪಚ್ಚನಾಡಿ (ಮುಖ್ಯ ಕಾರ್ಯದರ್ಶಿ, ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ (ರಿ), ಮಂಗಳೂರು), ಶ್ರೀ ಬಾಲಕೃಷ್ಣ ಕುಕ್ಕಿಯನ್ ( ಮಾಲಕರು , ಶ್ರೀ ದೇವಿ ಕ್ಯಾಟರಿಂಗ್), ಕುಮಾರಿ ಚೈತ್ರ (ಕಾರ್ಯನಿರ್ವಾಹಕಿ), ಶ್ರೀ ಪ್ರದೀಪ್ ಗೌರೀಶ (ಅಧ್ಯಕ್ಷರು, ಪೃಥ್ವಿ ಸೇವಾ), ಶ್ರೀಮತಿ ವಿಲ್ಮಾ ಮೊಂತೆರೊ (ಕಾರ್ಯದರ್ಶಿ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ)/ಅಧ್ಯಕ್ಷೆ, ಕಥೋಲಿಕ್ ಸಭಾ ಸಿಟಿ ವಲಯ ) ಹಾಗೂ ಶ್ರೀ ಡೇವಿಡ್ ಕ್ರಾಸ್ತಾ (ಅಧ್ಯಕ್ಷರು, ಕಥೋಲಿಕ್ ಸಭಾ ಶಕ್ತಿನಗರ ಘಟಕ) ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಪ್ರಾರ್ಥನ ಗೀತೆ ಶ್ಯಾಮಲ ಟೀಚರ್ ನಡೆಸಿಕೊಟ್ಟರು. ಸ್ವಾಗತವನ್ನು ಶ್ರೀ ಅರುಣ್ ಡಿ’ಸೋಜಾ ( ಸೌಹಾರ್ದ ಸಮಿತಿ ಸಂಚಾಲಕರು ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ)/ಅಧ್ಯಕ್ಷರು ನೇಜಿಗುರಿ ಗುಂಪು,) ನೆರವೇರಿಸಿದರು. ಮುಗ್ರೋಡಿ ಟೈಗರ್ಸ್ ಪಂಗಡ ಹುಲಿ ಕುಣಿತ ಪ್ರದರ್ಶಿಸಿತು. ಸಮಾಜಸೇವಕ ಶ್ರೀ ಶುಭಕರ್ ಮುಗ್ರೋಡಿ ಅವರಿಗೆ ಸನ್ಮಾನ ಸಲ್ಲಿಸಲಾಯಿತು. ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನವೂ ನಡೆಯಿತು.
ಅತಿಥಿಗಳಿಗೆ ಸ್ಮರಣಿಕೆ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಎರಡು ಕುಟುಂಬಗಳಿಗೆ ಆರ್ಥಿಕ ನೆರವು (ಚೆಕ್) ನ್ನು ನೇಜಿಗುರಿ ಸ್ವಸಾಯ ಸಂಘ ಅಧ್ಯಕ್ಷರು ಹರಿಣಿ ಇವರಿಗೆ ಹಸ್ತಾಂತರಿಸಲಾಯಿತು . ಶ್ರೀಮತಿ ವಿಲ್ಮಾ ಮೊಂತೆರೊ ಧನ್ಯವಾದ ಸಲ್ಲಿಸಿದರು. ಶ್ರೀ ರಾಕೇಶ್ ನೇಜಿಗುರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.