ದೀಪಾವಳಿ ಆಚರಣೆ
ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ ಇವರ ಮುಂದಾಳತ್ವದಲ್ಲಿ ಮುಗ್ರೋಡಿ ಟೈಗರ್ಸ್, ಕಥೊಲಿಕ್ ಸಭಾ, ಸ್ತ್ರಿ ಸಂಘಟನೆ, ಸೌವರ್ದ ಆಯೋಗ, ICYM, YCS, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ದೀಪಾವಳಿ ಆಚರಣೆ-2023, 18.11.2023 ಶನಿವಾರ ಸಂಜೆ 6 ಗಂಟೆಗೆ ಚರ್ಚ್ ಸಭಾ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗೂ ನೇಜಿಗುರಿ ಗುಂಪು

