ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ), ಶಕ್ತಿನಗರ ಘಟಕ, ಸೇವಾ ಪ್ರಕಲ್ಪ ಚಾರಿಟೇಬಲ್ ಟ್ರಸ್ಟ್(ರಿ),ಮಂಗಳೂರು ಮತ್ತು ನೇಜಿಗುರಿ ಗುಂಪು ಇವರ ಜಂಟಿ ಆಶ್ರಯದಲ್ಲಿ ಹಾಗೂ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ನೇತ್ರದಾನ ಜಾಗೃತಿ ಅಭಿಯಾನ ದಿನಾಂಕ 11.04.2021 ರಂದು ಬೆಳಿಗ್ಗೆ 8.30ಗೆ ದೇವ ಮಾತಾ ದೇವಾಲಯ ಶಕ್ತಿನಗರದಲ್ಲಿ ಅಂದುಕೊಂಡಂತೆ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು.
8:30 ಗಂಟೆಗೆ ನೇತ್ರದಾನದ ಕಾರ್ಯಕ್ರಮ ಆರಂಭವಾಯಿತು. ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ), ಶಕ್ತಿನಗರ ಘಟಕದ ಅಧ್ಯಕ್ಷರಾದ ಜಾನ್ಸನ್ ಡಿಸೋಜಾ ಹಾಜರಿದ್ದ ಸರ್ವರಿಗೂ ಸ್ವಾಗತಿಸಿದರು.
ದೇವ ಮಾತಾ ದೇವಾಲಯದ ಧರ್ಮಗುರುಗಳಾದ ವಂದನಿಯ ಜೆರಾಲ್ಡ್ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಿನ್ಸೆಂಟ್ ಕಾರ್ಲೊ, ಕಾರ್ಯದರ್ಶಿ ಪೌಲಿನ್ ಡಿಸೋಜಾ, ಸೇವಾ ಪ್ರಕಲ್ಪ ಚಾರಿಟೇಬಲ್ ಟ್ರಸ್ಟ್(ರಿ),ಮಂಗಳೂರು ಇದರ ಅಧ್ಯಕ್ಷರಾದ ಪ್ರಶಾಂತ್ ಪೈ, ಪೃಥ್ವಿ ಸೇವಾ ಇದರ ಅಧ್ಯಕ್ಷರಾದ ಪ್ರದೀಪ್ ಗೌರೀಶ್, ನೇತ್ರದಾನದ ಸಂಯೋಜಕರಾದ ರಾಕೇಶ್ ಕುಮಾರ್, ನೇಜಿಗುರಿ ಗುಂಪುನ ಅಧ್ಯಕ್ಷರಾದ ಅರುಣ್ ಡಿಸೋಜ, ನೇಜಿಗುರಿ ಗುಂಪುನ ರಾಮಚಂದ್ರ ಅತಿಥಿಯಾಗಿದ್ದರು. ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ), ಶಕ್ತಿನಗರ ಘಟಕದ ಅಧ್ಯಕ್ಷರಾದ ಜಾನ್ಸನ್ ಡಿಸೋಜಾ ಹಾಗೂ ಕಾರ್ಯದರ್ಶಿ ಡೊನಾಲ್ಡ್ ಪಿಂಟೊ ವೇದಿಕೆಯಲ್ಲಿ ಉಪಸ್ತಿತರಿದರು.
ಅತಿಥಿಗಳಿಂದ ನೇತ್ರದಾನದ ಬ್ಯಾನರ್ ಬಿಡಿಸುವುದರ ಮೂಲಕ ನೇತ್ರದಾನದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸೇವಾ ಪ್ರಕಲ್ಪ ಚಾರಿಟೇಬಲ್ ಟ್ರಸ್ಟ್(ರಿ),ಮಂಗಳೂರು ಇದರ ಅಧ್ಯಕ್ಷರಾದ ಪ್ರಶಾಂತ್ ಪೈ ಅವರು ನೇತ್ರದಾನದ ಬಗ್ಗೆ ಮಾಹಿತಿನೀಡಿದರು.
ನೇಜಿಗುರಿ ಗುಂಪುನ ಅಧ್ಯಕ್ಷರಾದ ಅರುಣ್ ಡಿಸೋಜ ಅವರು ನೆರೆದವರಿಗೆ ಧನ್ಯವಾದದ ಮಾತು ಹೇಳಿದರು.
ನೆರೆದವರು ತಮ್ಮ ಹೆಸರನ್ನು ನೇತ್ರದಾನ ಮಾಡಲು ನೊಂದಾಹಿಸಿದರು.