ಭಾಷಣ ಸ್ಪರ್ಧೆ
Report: Arun Dsouza ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ, ಕಥೊಲಿಕ್ ಸಭಾ, ಶಕ್ತಿನಗರ ಘಟಕದ ವತಿಯಿಂದ ಕೊಂಕಣಿ ಮತ್ತು ಕನ್ನಡ ಭಾಷಣ ಸ್ಪರ್ಧೆಯನ್ನು ಅಕ್ಟೋಬರ್ 23 ರಂದು ಭಾನುವಾರ ಚರ್ಚ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಟೋನಿ ಪಿಂಟೋ ಪ್ರಾರ್ಥನೆಯನ್ನು ನೆರವೇರಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ಅರುಣ್ ಡಿಸೋಜ ರವರು ಸಭೆಯನ್ನು ಸ್ವಾಗತಿಸಿ ತೀರ್ಪುಗಾರರನ್ನು ಪರಿಚಯಿಸಿದರು. ಸ್ಪರ್ಧೆಯಲ್ಲಿ ಉತ್ಸಾಹಿ ಮಕ್ಕಳು ಭಾಗವಹಿಸಿ ತಮ್ಮ ಭಾಷಣದ ಕೌಶಲ್ಯವನ್ನು ಪ್ರದರ್ಶಿಸಿದರು. ವಂದನಿಯ ಫಾದರ್ ಜೆರಾಲ್ಡ್ ಡಿಸೋಜಾ ಅವರು […]